If farmer willing to earn, then farmer can earn from every part of his agri produce.
ಪೊರಕೆಗೆ ಉದ್ಯಮದಿಂದ ಬದುಕುತ್ತಿರುವ ಕಡೂರಿನ ದಸ್ತಗೀರ್* ಸಾಬ್*
ಕಾಮದೇನು ಎಂದರೆ ಎಳನೀರು ಮಾತ್ರ ಅಲ್ಲ, ಗರಿ ಕೂಡ. ಗರಿ ಎಂದರೆ ಗರಿಯಷ್ಟೇ ಅಲ್ಲ, ಕಸಬರಿಕೆ. ಗರ್ಜೆಯ ಗ್ರಾಮದ ಕಸಬರಿಕೆ ಎಂದರೆ ಗುಡಿಸಿ ಹಾಕುವುದಷ್ಟೇ ಅಲ್ಲ, ಕೋಟಿ ಕೋಟಿ ಲಾಭ ಬಾಚಿ ಕೊಡುವುದು. ಈ ಊರಿನ ಪೊರಕೆ ಪರದೇಶದ ಮಾರುಕಟ್ಟೆಗೆ ಕಾಲಿಟ್ಟ ಕತೆ ಗೊತ್ತಾ?
ಕರಾವಳಿಯ ಸಾಲು ಸಾಲು ತೆಂಗಿನಮರಗಳಿವೆ. ಅದನ್ನು ನೋಡಿದಾಕ್ಷಣ ಒಂದು ಅನುಮಾನ ಕಾಡುತ್ತದೆ. ಇದರ ಗರಿಗಳು ಒಣಗಿ ಉದುರಿದರೆ ಏನು ಮಾಡುತ್ತಾರೆ?
ಒಲೆ ಉರಿಸಲು ಬಳಸಬಹುದು. ಇಲ್ಲವೇ ಗೆದ್ದಲಿಗೆ ಆಹಾರವಾಗಬಹುದು. ಸುಮ್ಮನೆ ಲೆಕ್ಕ ಹಾಕಿದರೂ ಟನ್*ಗಟ್ಟಲೇ ತೆಂಗಿನ ಗರಿಗಳು ಸಿಗುತ್ತವೆ. ಎಷ್ಟೂ ಅಂಥ ಒಲೆಗೆ ಹಾಕುವುದು, ಎಷ್ಟೂ ಅಂಥ ಗೆದ್ದಲು ತಿನ್ನುತ್ತದೆ.
ನೀವು ಕಡೂರಿನ ಗರ್ಜೆ ಗ್ರಾಮದಲ್ಲಿ ಇದಕ್ಕೆ ಪರಿಹಾರವಿದೆ. ಇಲ್ಲೂ ಕೂಡ ಹೇರಳ, ಹೇರಳ ತೆಂಗಿನ ಮರಗಳಿವೆ. ಇಲ್ಲಿ ಗರಿಗಳು ಉದುರಿದರೆ ಎಷ್ಟು ಕುಟುಂಬಗಳ ಹೊಟ್ಟೆ ತುಂಬುತ್ತದೆ. ಗರಿಉದುರದೇ ಇದ್ದರೆ ಉದರ ನಿಮಿತ್ತಂಗೆ ಬೇರೆ ಕೆಲಸ ಹುಡುಕಿ ಕೊಳ್ಳಬೇಕು. ಅಂಥದ್ದೇನು ಮಾಡ್ತಾರೇ ಅಂದಿರಾ? ನೋಡಿ... ಉದುರುವ ಗರಿಗಳು ಹೆಂಗಸರು, ಮಕ್ಕಳು, ಮುದುಕರೆಂದಿಲ್ಲದೆ ಎರಡು ಸಾವಿರ ಮಂದಿಗೆ ದುಡಿಮೆಯ ಮೂಲಕ ಬದುಕಿನ ಮಾರ್ಗ ತೋರಿಸಿದೆ. ಇದರಿಂದ ನಡೆಯುವ ವಾರ್ಷಿಕ ವ್ಯವಹಾರ ಏಳು ಕೋಟಿ ರೂಪಾಯಿ ಅಂದರೆ ನೀವು ನಂಬಲೇ ಬೇಕು. ಇದು ಹೇಗೆ ಸಾಧ್ಯ? ಕೆಲಸ ಸುಲಭ. ಎಲ್ಲರೂ ಬೆಳಗ್ಗೆ ಎದ್ದು ತೆಂಗಿನ ತೋಟಗಳಿಗೆ ಹೋಗುತ್ತಾರೆ. ತೆಂಗಿನ ಸೋಗೆಯಿಂದ ಕಡ್ಡಿಗಳನ್ನು ಬೇರ್ಪಡಿಸಿ 125 ಕಡ್ಡಿಗಳಿಗೆ ಒಂದರಂತೆ ಕಟ್ಟು ಹಾಕುತ್ತಾರೆ. ಸಂಜೆಯ ಹೊತ್ತಿಗೆ ಕಡೂರಿನಿಂದ ದ್ವಿಚಕ್ರ; ತ್ರಿಚಕ್ರ; ನಾಲ್ಕು ಚಕ್ರ ವಾಹನಗಳೊಂದಿಗೆ ವ್ಯಾಪಾರಿಗಳ ದಂಡು ಅಲ್ಲಿಗೆ ಬರುತ್ತದೆ. ಬಂದು ಒಂದು ಕಟ್ಟಿಗೆ ಒಂದು ರೂಪಾಯಿ ಬೆಲೆ ನೀಡಿ ಖರೀದಿಸುತ್ತದೆ. ತೆಂಗಿನ ಗರಿಗಳಿಂದ ದುಡ್ಡು ಹೇಗೆ ಅಂತೀರಾ? ಲೆಕ್ಕಾಚಾರ ನೋಡಿ ಹೀಗಿದೆ. ಮೂರು ತೆಂಗಿನಗರಿಗಳಿಂದ ಏಳುನೂರು ಕಡ್ಡಿ ಸಿಗುತ್ತದೆ. ಗಂಟೆಗೆ ಹತ್ತು ರೂಪಾಯಿ ದುಡಿಮೆ. ಸಂಜೆಯ ಹೊತ್ತಿಗೆ ಪ್ರತಿಯೊಬ್ಬನ ಕೈಸೇರುವ ಹಣ ನೂರರಿಂದ ನೂರಾಐವತ್ತು ರೂ. ತಿಂಗಳಿಗೆ 4ರಿಂದ 4.5ಸಾವಿರ ಸಂಬಳ. ಇವರಿಂದ ಖರೀದಿಸಿದ ಕಟ್ಟುಗಳನ್ನು ವ್ಯಾಪಾರಿಗಳು ರಖಂ ವ್ಯಾಪಾರಿಗಳಿಗೆ ಕಿಲೋಗೆ ಎಂಟು ರೂ.ಬೆಲೆಗೆ ಮಾರುತ್ತಾರೆ. ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರು ಈ ಕಡ್ಡಿಗಳನ್ನು ಕತ್ತಿಯಿಂದ ಸವರಿ ಶುಚಿ ಮಾಡಿ ಕೊಡುವುದಕ್ಕೆ ಕಿಲೋಗೆ ಐವತ್ತು ಪೈಸೆ ಪಡೆಯುತ್ತಾರೆ. ಕಡ್ಡಿಗಳನ್ನು ಮುನ್ನೂರು ಗ್ರಾಂ.ತೂಕದ ಕಟ್ಟು ಮಾಡಿ ಪಾಲಿಥಿನ್* ಹಾಳೆಯಲ್ಲಿ ಪ್ಯಾಕು ಮಾಡಿ ಕೊಟ್ಟಾಗ ಏಳು ರೂ.ಕೂಲಿ ಸಿಗುತ್ತದೆ. ಹೀಗೆ ಗರ್ಜೆಯ ತೆಂಗಿನ ಕಡ್ಡಿಗಳು ನೆಲ ಗುಡಿಸುವ ಪೊರಕೆಗಳಾಗಿ ಉತ್ತರ ಭಾರತದ ಎಲ್ಲ ಊರುಗಳನ್ನೂ ದಾಟಿ ನೇಪಾಳದ ಗಡಿಯವರೆಗೂ ತಲಪುತ್ತದೆ ಎಂದರೆ ನೀವು ನಂಬಲೇ ಬೇಕು.
ಒಂದು ಪೊರಕೆಗೆ ಇಪ್ಪತ್ತೆ„ದು ರೂ.ಬೆಲೆಯಾಗುತ್ತದೆ. ಗರಿಗಳಿಂದ ಕಡ್ಡಿಗಳನ್ನು ತೆಗೆಯಲು ರೈತರು ಏನೂ ಪ್ರತಿಫ*ಲ ಪಡೆಯುವುದಿಲ್ಲ. ಕಡ್ಡಿ ತೆಗೆದ ಬಳಿಕ ಉಳಿಯುವ ಗರಿ ಉತ್ತಮ ಗೊಬ್ಬರವಾಗುತ್ತದೆ.
ಮೂರು ದಶಕಕ್ಕೂ ಹೆಚ್ಚಿನಕಾಲದಿಂದ ಇದೇ ಉದ್ಯಮದಿಂದ ಬದುಕುತ್ತಿರುವ ಕಡೂರಿನ ದಸ್ತಗೀರ್* ಸಾಬ್* ಪ್ರತಿವರ್ಷ ಹದಿನಾರು ಟನ್* ಭರ್ತಿ ಪೊರಕೆ ತುಂಬಿದ ನೂರಾ ಇಪ್ಪತ್ತು ಲಾರಿಗಳನ್ನು ಉತ್ತರ ಭಾರತದೆಡೆಗೆ ಕಳುಹಿಸುತ್ತಾರೆ. ಅವರ ಹಾಗೆಯೇ ಉದ್ಯಮನಿರತರಾದ ಇನ್ನೂ ಐವರಿ ¨ªಾರೆ. ಎಲ್ಲ ಸೇರಿದರೆ ಕಡೂರಿನಿಂದ ರವಾನೆಯಾಗುವ ಪೊರಕೆಗಳು ಐನೂರು ಲಾರಿಗಳಿಗಿಂತ ಅಧಿಕ ಎನ್ನುವ ಅಂದಾಜಿದೆ. ಈ ಸರಕಿನ ಮೇಲೆ ಉತ್ತರಪ್ರದೇಶ ಸರಕಾರ ವಿಧಿಸುತ್ತಿದ್ದ ಮಾರಾಟ ತೆರಿಗೆಯನ್ನು 1993ರಲ್ಲಿ ಅಲಹಾಬಾದ್* ನ್ಯಾಯಾಲಯ ರದ್ದುಪಡಿಸಿತು. ಆಮೇಲೆ ಕರ್ನಾಟಕ ಸರಕಾರ ಆ ವರೆಗೆ ವಿಧಿಸುತ್ತಿದ್ದ ಶೇ.4ರ ತೆರಿಗೆಯನ್ನು ನಿಲ್ಲಿಸಿತು. ಈಗ ಇವರ ಕೈತುಂಬಾ ಸಂಬಳ.
ತೆಂಗು ಬೆಳೆಯುತ್ತಿರುವ ನಮ್ಮ ರೈತರೇ ನೋಡಿ.. ತೆಂಗಿನ ಕಡ್ಡಿಯಿಂದ ಕೋಟಿ ದುಡಿಯಬಹುದು. ಇತರೆಡೆಯ ರೈತರು ವ್ಯರ್ಥವಾಗುತ್ತಿರುವ ತೆಂಗಿನ ಕಡ್ಡಿಗಳಿಂದ ಚಿನ್ನದ ಗಳಿಕೆ ಮಾಡುವತ್ತ ಗನಹರಿಸಿದರೆ ಏನಾಗಬಹುದು?
ಸುಮ್ಮನೆ ಯೋಚಿಸಿ.
Regards.
SWAMY